ಕಾಲ ಸಾಗುತ್ತಿರುತ್ತದೆ . . . .
ಆ ಕಾಲದ ಹಿಂದೆ ನಮ್ಮ ಮ್ಯಾರಥಾನ್ ಸಾಗುತ್ತಲೇ ಇರಬೇಕು. . .
ಸ್ವಲ್ಪ ಎಡವಿಬಿದ್ದು ಸುಧಾರಿಸಿಕೊಳ್ಳಲು ಕುಳಿತರೆ ನಮ್ಮನ್ನು ತುಳಿದುಕೊಂಡು ಮತ್ತೊಬ್ಬರು ಮುಂದುವರಿದಿರುತ್ತಾರೆ . . .
ಹೀಗೆ ಕಾಲದ ಹಿಂದೆ ಓಡುತ್ತ ಬಂದ ನಾನು ಹತ್ತು ವರುಷ ಮನೆಯಲ್ಲಿದ್ದು ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್ ಸೇರುವ ಅವಕಾಶ ಒದಗಿ ಬಂತು . . .
ನನ್ನ sslc ಪರೀಕ್ಷೆ ಮುಗಿಸಿ ಪಿಯುಸಿ ಮಾಡಲು ಹಾಸ್ಟೆಲ್ಗೆ ಸೇರಿದ ನಾನು ಮರೆಯಲಾಗದ ಕ್ಷಣಗಳನ್ನು ನನ್ನ ನೆನಪಿನ ಪುಟಗಳಿಗೆ ಈ ಹಾಸ್ಟೆಲಿನಲ್ಲಿ ಸೇರಿಸಿ ಕೊಂಡೆ . . .
ಸಾದಾರಣವಾಗಿ ಎಲ್ಲ ಹಾಸ್ಟೆಲ್ಗಳಲ್ಲಿ ಇರುವಂತೆ ನೀತಿ ನಿಯಮಾವಳಿಗಳು ಇಲ್ಲಿ ಇರುತ್ತಿದ್ದರೆ ಈ ಹಾಸ್ಟೆಲ್ ಜೀವನ ಬೇಸತ್ತು ಹೋಗುತ್ತಿತ್ತೇನೋ, ಆದರೆ ಈ ವಾರ್ಡನ್ ಇಲ್ಲದ ಹಾಸ್ಟೆಲ್ ಹಾರಲು ಬಿಟ್ಟ ಪಂಜರದ ಹಕ್ಕಿಯಂತೆ ಅನಿಸತೊಡಗಿತು. . .
ಪ್ರಥಮವಾಗಿ ಬರ್ಜರಿ ಎಂಟು ಜನರ ರೂಮು ಸಿಕ್ಕಿದಾಗ ಆ ರೂಮೊಂದು ಮೋಜಿನ ತಾಣದಂತಿತ್ತು, ಪ್ರಥಮ ಕಿರು ಪರೀಕ್ಷೆಯ ಅಂಕ ನೋಡಿ ಆ ಮೋಜಿನ ತಾಣವನ್ನು ೨ ಜನರ ರೂಮಿಗೆ ಅನಿವಾರ್ಯವಾಗಿ ಬದಲಿಸಬೇಕಾಗಿ ಬಂದಿತು. . .
ಇಲ್ಲಿಗೆ ಸಾದಾರಣವಾಗಿ ನನ್ನ ಒಂಟಿತನ ಪ್ರಾರಂಭವಾಯಿತು . . .
ಹೆಚ್ಚಾಗಿ ಒಬ್ಬನೇ ರೂಮಿನಲ್ಲಿ ಇರುತ್ತಿದ್ದ ನಾನು ಈ ಒಂಟಿತನಕ್ಕೆ ಒಗ್ಗಿಕೊಳ್ಳುತ್ತ ಹೋದೆ. . .
ಕಾಲ ಕ್ರಮೇಣ ಅದನ್ನು ಇಷ್ಟಪಟ್ಟೆ . . .
ಹೆಚ್ಚಾಗಿ ಮಾತನಾಡಲು ಇಷ್ಟಪಡದ ನನ್ನ ಗೆಳೆತನ ಪುಸ್ತಕದೊಂದಿಗೆ ಬೆಳೆಯಿತು . . .
ಆದರು ಒಮ್ಮೊಮ್ಮೆ ಈ ಹುಚ್ಚು ಮನಸ್ಸಿನ ಮಾಯೆಯಿಂದ ಯಾವಾಗಲೋ ಒಮ್ಮೆ ಸುತ್ತಾಡಲು ಗೆಳೆಯರೊಂದಿಗೆ ಹೊರ ಹೋಗುತ್ತಿದ್ದೆ . . .
ಆ ಎರಡುವರ್ಷ ಹೇಗೆ ಸಾಗಿತೋ ಗೊತ್ತಿಲ್ಲ !. . .
ಕೋನೇ ಪರೀಕ್ಷೆ ಬಂದೇಬಿಟ್ಟಿತು . . . ನಂತರ CET ಪರೀಕ್ಷೆಯ ಸಿದ್ದತೆ ಈ ಹುಚ್ಚು ಮನಸ್ಸಿನಿಂದಾಗಿ ಅಷ್ಟಕ್ಕಷ್ಟೇ. . .
ಬೋರ್ಡ್ ಪರೀಕ್ಷೆಯಲ್ಲಿ ಏನೋ ಒಳ್ಳೆ ಅಂಕಬಂದರೂ ಈ ಹುಚ್ಚು ಮನಸ್ಸಿನ ದೆಸೆಯಿಂದ CET ರಾಂಕ್ ಅಷ್ಟೇನೂ ಚೆನ್ನಾಗಿ ಬರಲಿಲ್ಲ . . .
ಈ ರಾಂಕಿನ ದೆಸೆಯಿಂದ ನನಗೆ ಬೇಕಾದ ಕಾಲೇಜೂ ಸಿಗಲಿಲ್ಲ . . . .!
ಕೊನೆಗೂ ನನಗೆ ಸಿಕ್ಕ ಕಾಲೇಜನ್ನು ಪಾಲಿಗೆ ಬಂದದ್ದೆ ಪಂಚಾಮೃತವೆಂದೆಸಿಕೊಳ್ಳುತ್ತಾ ತೃಪ್ತಿ ಪಟ್ಟೆ. . .
ಮತ್ತೆ ಈ ಎರಡನೇ ಹಂತದ ಹಾಸ್ಟೆಲ್ ಜೀವನ . . .
ಇಲ್ಲಿ ಮತ್ತದೇ ಒಂಟಿತನ . . .
ಆದರೆ ಇಲ್ಲಿ ಆ ಒಂಟಿತನವನ್ನು ಪ್ರೀತಿಸಲು ಶುರುಮಾಡಿದೆ . . .
ಈ sms ಚಾಟಿಂಗ್ ಇಷ್ಟವಿಲ್ಲದಿದ್ದರೂ ಮತ್ತದೇ ಹುಚ್ಚುಮನಸ್ಸಿನ ಮಾಯೆ . . .
ಹೀಗೇ ಸಾದಾರಣವಾಗಿ ಎರಡು ವರ್ಷ ಕಳೆದು ಹೋಗಿದೆ . . .
ನೋಡೋಣ !ಈ ಹುಚ್ಚು ಮನಸ್ಸು ಇನ್ನೇನು ಮಾಡುತ್ತದೆಂದು !!!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ