(ಇಲ್ಲಿ ಬಳಸಿರುವ ಚಿತ್ರಗಳು ಸಂದರ್ಭಿಕ! ಅಂತರ್ಜಾಲ ಕೃಪೆ)
ಚಿಲ್ರೆ ಇಲ್ವಾ ಬಾಸ್!!! ಇದು ದಿನನಿತ್ಯದ ಗೋಳು.
ಇನ್ನು ಬಸ್ ನಲ್ಲಂತೂ ಕೇಳಲೇ ಬೇಡಿ!! ನಿಮ್ಮ ಬಳಿ ಚಿಲ್ಲರೆ ಇಲ್ಲ ಅಂದ್ರೆ ಕಂಡಕ್ಟರ್ ಮಹಾಶಯ ನಿಮ್ಮನ್ನು ಮಹಾಪರಾಧಿಯಂತೆ ನೋಡುತ್ತಾನೆ.
ಇನ್ನು ಕೆಲವರು ಟಿಕೆಟ್ ನ ಹಿಂದೆ ಏನೋ ಗೀಚಿ ತಮಗೆ ಸಂಬಧವೇ ಇಲ್ಲದಂತೆ ಹೊರಟು ಹೋಗಿಬಿಡುತ್ತಾರೆ!ಇನ್ನು ಚಿಲ್ಲರೆ ಕೇಳಲು ಹೋದಿರೆಂದುಕೊಳ್ಳಿ. ಏನ್ ಸ್ಸಾ....ರ್ ನಿಮ್ ೫ ರುಪಾಯಿ ಹಿಡ್ಕೊಂಡು ಓಡೊಗ್ತೀವಾ! ಮನೆ ಕಟ್ಟಕ್ಕಾಗುತ್ತಾ ನಿಮ್ ಎರಡ್ ರುಪಾಯಿನಲ್ಲಿ! ಎಂದು ಪ್ರವಚನ ಶುರುಮಾಡ್ತಾನೆ ನಮ್ ಬಸ್ಸ್ ಗುರು!!!
So in general. "ಚಿಲ್ಲರೆ ಇಲ್ಲದ ಪ್ರಯಾಣ ನಶ್ಟಕ್ಕೆ ಆಹ್ವಾನ"!!
coming to the hotel boss!!
ನಿಮ್ಮ ಬಳಿ ಚಿಲ್ರೆ ಇಲ್ಲಾ ಅಂದ್ಕೊಳ್ಳಿ ನಿಮ್ಮ ಹೊಟ್ಟೆಗೆ ತಣ್ಣೀರ್ ಬಟ್ಟೆ!!!
೫೦೦ ತೆಗೆದು ನೀವೇನಾದರೂ ಒಂದ್ ಪ್ಲೇಟ್ ಇಡ್ಲಿ ಕೊಡಪ್ಪಾ ಅಂತ ಕೇಳಿದ್ರಾ ಅಂತಿಟ್ಕೊಳ್ಳಿ. . ಚಿಲ್ರೆ ಇಲ್ಲಾ ಸಾರ್. ಅಸ್ಟೇ ಅವನ ಉತ್ತರ!ಮುಂದೆ ಏನಾದ್ರು ಮಾತಾಡಿದ್ರಿ ಅಂದ್ಕೊಳ್ಳಿ! ಏನ್ ಸಾರ್ , ಎಲ್ರಿಗೂ ಎಲ್ಲಿಂದ ತರಣ ಚಿಲ್ರೆ ಅಂತ ತನ್ನ ಗೋಳನ್ನ ಹೇಳಿ ಕೊಳ್ತಾನೆ.
one more catagory!!
೩೬, ೩೭ ಈ ತರ ಬಿಲ್ಲ್ ಆಯ್ತು ಅಂದ್ಕೋಳ್ಳಿ ನಿಮಿಗೆ ಹೇಳೋವಾಗ ೪೦ ಹೇಳ್ ಬಿಡ್ತಾನೆ!! ಫ಼ೈಟೂ ಇಲ್ಲಾ , ಚಿಲ್ರೆನೂ ಇಲ್ಲ!!
ಇವರ ನಡುವೆ ನಾವೇ ಕೊನೆಗೆ ಚಿಲ್ರೆ ಜನಗಳಾಗೋಗ್ಬಿಡ್ತೀವಿ ಅಲ್ವಾ!!