ಇಂದು ಕಾರ್ಗಿಲ್ ಯುದ್ದದ ವಿಜಯೋತ್ಸವ ದಿನ,ತನ್ನ ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನು ತೊರೆದ ಮಹಾನ್ ಹುತಾತ್ಮರ ದಿನ.
ಇಂದಿಗೆ ಶತ್ರು ದೇಶದ ವಿರುದ್ದ ವೀರೋಚಿತ ಜಯ ಪಡೆದು ಹನ್ನೆರಡು ವರ್ಷ. . . ಆದರೆ ಹುತಾತ್ಮರ ನೆನಪು ಮಾತ್ರ ಅಮರ . . .
ವಿಕ್ರಂ ಬಾತ್ರಾ,ಮನೋಜ್ ಕುಮಾರ್ ಪಾಂಡೆ,ಸಂಜೀವ್ ಕುಮಾರ್ ಮುಂತಾದ ಯೋಧರು ಕೊರೆಯುವ ಚಳಿಯಲ್ಲೂ ತಮ್ಮ ಪ್ರಾಣವನ್ನು ತಾಯ್ನಾಡಿಗಾಗಿ ತಮ್ಮ ಗುಂಡಿಗೆಯನ್ನು ನೀಡಿದವರಿಗೊಂದು ಸಲಾಂ. . . .
ತಮ್ಮ ಮನೆ,ಮಕ್ಕಳು,ಮಡದಿ,ಹೆತ್ತವರನ್ನೆಲ್ಲ ತೊರೆದು ತಾಯ್ನಾಡಿಗಾಗಿ ದೇಶ ಸೇವೆ ಮಾಡುವವರನ್ನು ಒಮ್ಮೆಯಾದರೂ ನೆನೆಸಿಕೊಳ್ಳದಿದ್ದರೆ ಹೇಗೆ. . . .
ಇಂತಹ ಹಿನ್ನೆಲೆಯುಳ್ಳ ಈ ನೆಲದಲ್ಲಿ ಇಂದಿನ ಪರಿಸ್ಥಿತಿ ನಿಜಕ್ಕೂ ಶೋಚನೀಯ. . . .ನಮ್ಮ ದೇಶವನ್ನು ರಕ್ತ ಸಿಕ್ತ ಭೂಮಿಯಾಗಿ ಮಾಡಲು ಬಂದ ಉಗ್ರರಿಗೆ ಸಕಲ ಸವಲತ್ತುಗಳುಳ್ಳ ಜೈಲುಗಳಲ್ಲಿ ರಕ್ಷಣೆ ಈ ನಮ್ಮ ವೀರ ಯೋಧರೇ ನೀಡ ಬೇಕಾಗಿ ಬಂದಿದೆ . . .
ಕಾರಣ ಈ ಹೊಲಸು ರಾಜಕಾರಣ,ರಾಜಕೀಯ ವ್ಯಕ್ತಿಗಳ ಹಣದಾಸೆ ವೋಟಿನಾಸೆ ಇತ್ಯಾದಿಗಳಿಂದ ನಮ್ಮ ದೇಶವನ್ನು ಹಾಳುಗೆಡವುತ್ತಿದ್ದರೂ ಕೈಕಟ್ಟಿ ನೋಡಿಕೊಂಡಿರಬೇಕಾದ ಹೀನ ಸ್ಥ್ಹಿತಿ ನಮಗೆ ಎದುರಾಗಿದೆ . .. .
ನಮ್ಮನ್ನು ರಕ್ಷಿಸುತ್ತಿರುವವರಿಗೆ ಸಹ ರಕ್ಷಣೆ ಇಲ್ಲದಂತಾಗಿದೆ ,ದುಷ್ಟರಿಗೆ ನೀಡುವ ಸವಲತ್ತಿನ ಒಂದು ಭಾಗವೂ ಅವರಿಗೆ ಸಿಗುತ್ತಿಲ್ಲ,ಆದರೆ ಈ ಭ್ರಷ್ಟತೆಯ ಕಾರಣಕರ್ತರು ನಾವೇ . . . ಇಂತಹ ಸಂದರ್ಭದಲ್ಲಿ ಭ್ರಷ್ಟರೇ ನಿಮ್ಮ ಭ್ರಷ್ಟತೆಯ ನಡುವೆ ಸಮಯ ಮಾಡಿಕೊಂಡು ನೀವೂ ಒಂದು ಬಾರಿ ಹುತಾತ್ಮರಿಗೆ ನಮಿಸಿ ನಿಮ್ಮ ಪಾಪ ಸ್ವಲ್ಪವಾದರೂ ಕಳೆದುಕೊಳ್ಳಿ . ..

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ