ಇಂದು ಕನ್ನಡ ರಾಜ್ಯೋತ್ಸವ . . .
ಕಂಗ್ಲೀಷನ್ನು ಮಾತೃಬಾಷೆಯಾಗಿಸಿಕೊಂಡ ವಿಶಾಲ ಹೃದಯಿಗಳ ಹಬ್ಬ . . . .
ಕನ್ನಡಕ್ಕಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡುವ ವಿಶಾಲ ಹೃದಯದ ಕನ್ನಡಿಗರು ಕನ್ನಡ ಮಾತನಾಡುವವರನ್ನು ಕಂಡರೆ ಏಕೋ ಅಷ್ಟಕ್ಕಷ್ಟೇ . . .
ತಮಗೆ ಕೆಲಸ ನೀಡಿದ infi ನಾರಾಯಣ ಮೂರ್ತಿ ,ಮ್ಯಾಗಸ್ಸ್ಯೆ ಪ್ರಶಸ್ತಿ ವಿಜೇತ ಹರೀಶ್ ಹಂದೆ ಮುಂತಾದವರೆಲ್ಲ ನಮ್ಮಂತೆ ಸಾಮಾನ್ಯ ಕನ್ನಡಿಗರು ಎಂಬುದನ್ನು ಮರೆತೆವೇನು ?
ಇದ್ದ ಕನ್ನಡದ ಒಂದೆರಡು ಶಾಲೆಗಳನ್ನು ಮುಚ್ಚಿ ಅದಕ್ಕೆ ವಿದ್ಯಾರ್ಥಿಗಳ ಕೊರತೆ ಕಾರಣ ಎಂದು ಸಬೂಬು ನೀಡುವ ನಾವು ಅಮೆರಿಕ ಕೇಳುವ ವಿದ್ಯಾವಂತ ಇಂಜಿನಿಯರ್ ಗಳು ಕಲಿತದ್ದು ಈ ಕನ್ನಡ ಮಾಧ್ಯಮ ಶಾಲೆ ಗಳಲ್ಲಿ ಎಂಬುದು ನಮಗೆ ತಿಳಿದಿಲ್ಲವೇನು?
ನಮ್ಮ ಮುಖ್ಯಮಂತ್ರಿಗಳನ್ನೇ ಜೈಲಿಗೆ ಅಟ್ಟಿ ನಮ್ಮ ರಾಜ್ಯ ಅತ್ಯಂತ ಭ್ರಷ್ಟ ರಾಜ್ಯ ಎಂದು ಡಂಗೂರ ಸಾರುವ ನಾವು ಕನ್ನಡಿಗರು . .
ಅಪ್ಪ ಅಮ್ಮ ಚಿಕ್ಕಮ್ಮ ದೊಡ್ಡಮ್ಮ ಎಂಬ ಸಂಬಂಧ ಕಳೆದು ಕೊಂಡು ಮೊಮ್ ಡ್ಯಾಡ್ ಅಂಕಲ್ ಆಂಟಿಗಳ ಮೊರೆ ಹೋಗಿರುವ ನಾವು ಎಷ್ಟು ಭಾವನಾತ್ಮಕ ವಾಗಿ ಬೆಸೆದು ಕೊಳ್ಳಲು ಸಾದ್ಯ . . .
ಕುವೆಂಪು ,ಬೇಂದ್ರೆ,ಕಾರಂತರಂತಹ ಮಹಾನ್ ಬರಹಗಾರರ ಬಗ್ಗೆ ಗೊತ್ತಿರದ ಕನ್ನಡದ ಕೂಸುಗಳಿಗೆ ಟೈಟಾನಿಕ್ ಕಥೆ ಒಂದಕ್ಷರ ತಪ್ಪಿಲ್ಲದೆ ಹೇಳುವ ಕಲೆ ಒಗ್ಗಿದೆ !!!
ಬೆಂಗಳೂರಿನ ವಿಧಾನ ಸೌಧ ಗೊತ್ತಿಲ್ಲದಿದ್ದರೂ ವೈಟ್ ಹೌಸ್ ಬಗ್ಗೆ ವಿವರಿಸುವವನೆ ನಮ್ಮ ಕನ್ನಡಿಗ ಸತ್ಪ್ರಜೆ !!!!
ಇನ್ನು ಮುಂದೆ ಯಾವಾಗಲಾದರೂ ನಮ್ಮ ಕನ್ನಡಿಗರು ಸುಧಾರಿಸಿ ನಮ್ಮ ಕನ್ನಡ ವಿಶ್ವದ ಪರಿಚಿತ ಭಾಷೆಯಾಗಲಿ ಎಂದು ಆಶಿಸುತ್ತ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು . . . .

