ಹಾಸ್ಟೆಲ್ನಲ್ಲಿ ರೂಮಿನಲ್ಲೇ ಕಾಲ ಕಳೆಯುವ ನಾನು ಮನೆಗೆ ಬಂದಾಕ್ಷಣ ನನ್ನ ಅಲೆತ ಪ್ರಾರಂಭವಾಗಿ ಬಿಡುತ್ತದೆ. .
ಪಶ್ಚಿಮಘಟ್ಟದ ತಪ್ಪಲಲ್ಲಿರುವ ಮೂಡಿಗೆರೆಯಲ್ಲಿ ಅಲೆಯಲು ಸ್ಥಳಗಳ ಕೊರತೆಯೇನಿಲ್ಲ. . .
ಸುತ್ತಮುತ್ತ ಹಳ್ಳಿಗಳಿರುವ ಈ ಮೂಡಿಗೆರೆಯಲ್ಲಿ ಕಾಫಿತೋಟ. . ಕೆಳಗೂರಿನ ಚಹ ತೋಟ. . .
ಚಾರ್ಮಾಡಿ ಘಾಟಿ ಇತ್ಯಾದಿಗಳನ್ನು ಗೆಳೆಯ ರಾಘವೇಂದ್ರನೊಂದಿಗೆ ಸುತ್ತುವ ಮಜವೇ ಬೇರೆ. . .
ಈ ಮಲೆನಾಡಿನಲ್ಲಿ ಮಳೆಗಾಲದಲ್ಲಿ ರಚ್ಚೆ ಹಿಡಿದು ಸುರಿಯುವ ಮಳೆಯನ್ನು ನೋಡುವಾಗ ನಮ್ಮ ಕಾಯ್ಕಿಣಿಯವರ ಮಳೆಯಸಾಲುಗಳು ನೆನಪಾಗುತ್ತದೆ. .
ಕುವೆಂಪುರವರ ಪ್ರಾಕೄತಿಕ ವರ್ಣನೆಗಳನ್ನು ಅನುಭವಿಸಬೇಕಾದರೆ ನೀವು ಮಲೆನಾಡಿಗೆ ಬರಬೇಕು ಸ್ವಾಮಿ!!
ಅದಕ್ಕೇ ಇರಬೇಕು ತೇಜಸ್ವಿಯವರು ಮೂಡಿಗೆರೆಯನ್ನು ಆರಿಸಿಕೊಂಡದ್ದು. . .
ಇನ್ನು ಚಳಿಗಾಲದ ಅನುಭವವನ್ನು ನೀವೇ ಬಂದು ಅನುಭವಿಸಬೇಕು. . .!
ಇನ್ನು ಈ ನನ್ನ ಅಲೆತದಲ್ಲಿ ನನ್ನ ಸೈಕಲ್‍ನ ಪಾತ್ರವನ್ನು ಹೇಳದೇ ಇದ್ದರೆ ಅದು ಪಾಪ ಮುನಿಸಿಕೊಂಡಿತೋ ಏನೋ!!
ಯಾವುದೇ ಗದ್ದೆ ಗುಡ್ಡಗಳನ್ನು ಏರುವಲ್ಲಿ ನಮ್ಮ ಜೊತೆಗೂಡುವ ಸೈಕಲ್‍ನ ಸ್ಥಾನವನ್ನು ಬೈಕ್ ನಿಭಾಯಿಸಲು ಸಮರ್ಥವಾಗಿದೆಯೇ??
ನಮ್ಮ ಅನುಭವದ ಕೆಲವು ತುಣುಕುಗಳನ್ನು ಕೆಳಗೆ ನೀಡಿದ್ದೇನೆ(ಕೆಲವನ್ನು ಮೊದಲೇ ಫೇಸ್ಬುಕ್ನಲ್ಲಿ ಹಾಕಿದ್ದೆ). . .ಹೇಗನ್ನಿಸಿತು ನಿಮಗೆ??ಹೇಳಲು ಮರೆಯದಿರಿ!!
ಪ್ರಕೄತಿಯನ್ನು ಸೆರೆ ಹಿಡಿಯುವ ಪ್ರಯತ್ನ : ಹರಿಪ್ರಸಾದ್ :)
 |
| ಕೆಳಗೂರು ಎಸ್ಟೇಟ್ |
 |
| ದುರ್ಗದ ಹಳ್ಳಿ |
 |
| ದುರ್ಗದ ಹಳ್ಳಿ |
ಈಗ ಹೇಳಿ . . .ಮಲೆನಾಡಿಗೆ ಬರಲೇ ಬೇಕೆಂದೆನಿಸುತ್ತಿಲ್ಲವೇ????
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ